ಮೂಕಜ್ಜಿಯ ಕನಸುಗಳು – In Depth Screening (19th Oct, 5:30 PM)

750.00 per pass

Oct 19 2019 | 5:30 - 9:30 PM at TERIFLIX Purple, Girinagar

This event is over.

Category:

Description

Kannada

ಡಾ.ಕೆ.ಶಿವರಾಮಕಾರಂತರ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ರಚಿತವಾಗಿ ಇಲ್ಲಿಗೆ ಐವತ್ತು ವರ್ಷಗಳಾಗಿವೆ. ೧೯೭೭ ರಲ್ಲಿ ಈ ಕೃತಿಗೆ ಭಾರತದ ‘ಜ್ಞಾನಪೀಠ’ ಪ್ರಶಸ್ತಿ ಲಭಿಸಿದೆ. ಸುವರ್ಣ ಸಂಭ್ರಮದ ಈ ಕೃತಿಯನ್ನು ದೃಶ್ಯರೂಪಕ್ಕೆ ತರುವ ಪ್ರಯತ್ನದ ಫಲವೇ ಈ ಚಲನಚಿತ್ರ.ಮೂಕಾಂಬಿಕೆಯದ್ದು ಬಾಲ್ಯವಿವಾಹ. ಲಗ್ನವಾದ ಕೆಲವೇ ದಿನಗಳಲ್ಲಿ ವಿಧವೆಯಾಗಿ ಮಡಿವಂತಿಕೆಯ ಕಟ್ಟಳೆಯಂತೆ ಕೆಂಪುಸೀರೆಯುಟ್ಟು ಮೂಲೆ ಸೇರುತ್ತಾಳೆ. ವ್ಯಾವಹಾರಿಕ ಜಗತ್ತಿನೊಂದಿಗೆ ತಪ್ಪಿದ ಸಂಪರ್ಕ, ತನ್ಮೂಲಕ ಪ್ರಾಪ್ತವಾದ ಏಕಾಂತತೆ ಹಾಗೂ ಎಳೆವೆಯಿಂದಲೇ ಬೆಳೆಸಿಕೊಂಡ ಸಂವೇದನಾ ಸಾಮರ್ಥ್ಯದಿಂದ ಆಕೆಗೆ ವಸ್ತುಗಳಾಚೆಯ ಸಂಗತಿಗಳು ಕಾಣಿಸತೊಡಗಿ ಅವನ್ನು ನಿರ್ಭಿಡೆಯಿಂದ ಹೇಳಿದ್ದರಿಂದ ಜನ ‘ಮರುಳು’ ಎಂಬ ಪಟ್ಟ ಕಟ್ಟಿ ಶಿಕ್ಷಿಸುತ್ತಾರೆ. ನೊಂದ ಮೂಕಾಂಬಿಕೆ ಲೌಕಿಕ ಜಗತ್ತಿನೊಂದಿಗೆ ಮಾತುಬಿಟ್ಟು ಮೂಕಿಯಾದವಳು; ವೃದ್ಧೆಯಾದಂತೆ ಮೂಕಜ್ಜಿಯಾಗುತ್ತಾಳೆ. ಈಗ ಮೂಕಜ್ಜಿ ಮೂಡೂರಿನಲ್ಲಿ ತನ್ನ ಸಂಬಂಧಿ ಸುಬ್ರಾಯನ ಆಶ್ರಯದಲ್ಲಿದ್ದಾಳೆ. ಮೂಕಜ್ಜಿಯನ್ನು ಎಲ್ಲರೂ ತಲೆ ಸಮ ಇಲ್ಲದವಳು ಎಂದು ತಿಳಿದಿದ್ದಾಗ, ಆಕೆಗಿರುವ ವಿಶೇಷ ಶಕ್ತಿಯನ್ನು ಚರಿತ್ರೆಯ ವಿದ್ಯಾರ್ಥಿಯಾಗಿರುವ ಸುಬ್ರಾಯ ಗುರುತಿಸಿ ತನಗೆ ಸಿಕ್ಕ ಪ್ರಾಚೀನ ವಸ್ತುಗಳನ್ನು ಅಜ್ಜಿಯ ಕೈಗಿಡುತ್ತಾನೆ. ಅದನ್ನು ಹಿಡಿದು ಕನಸು ಕಾಣುವ ಅಜ್ಜಿ ಪುರಾತನ ಜಗತ್ತನ್ನು ಬಿಚ್ಚಿಡುತ್ತಾಳೆ. ಭಾರತೀಯ ಬದುಕಿನಲ್ಲಿ ಪ್ರಕೃತಿಯ ಪಾತ್ರ, ದೇವರು, ವಿಗ್ರಹ ಪೂಜೆ, ಲೈಂಗಿಕ ಸಂಬಂಧಗಳ ವಿಕಾಸ, ಧರ್ಮಗಳ ಹುಟ್ಟು ಮತ್ತು ತಿಕ್ಕಾಟಗಳ ವಿಕೃತಿ, ಸುಕೃತಿಗಳ ವಿಶ್ಲೇಷಣೆ ನಡೆಸುತ್ತಾಳೆ. ಜೊತೆಗೆ ಚಿತ್ರದಲ್ಲಿ ಬೇರೆ ಉಪಕಥೆಗಳೂ ಇವೆ.

ಅದೇ ಊರಿನ ಗಾಣಿಗ ರಾಮಣ್ಣ ಮತ್ತು ಅವನ ಹೆಂಡತಿ ನಾಗಿಯ ಬದುಕಿನಲ್ಲಿ ಪ್ರವೇಶಿಸುವ ಶೀನಪ್ಪ ನಾಗಿಯನ್ನು ಮರುಳುಮಾಡಿ ಬಳಸಿಕೊಂಡು ಮಗುವಾದ ನಂತರ ಬೀದಿಪಾಲು ಮಾಡುತ್ತಾನೆ. ನಾಗಿ ಎದೆಗುಂದದೆ ಮಗಳನ್ನು ಬೆಳೆಸಿದ್ದಾಳೆ. ಅಪರಿಹಾರ್ಯವೆನಿಸಿದ್ದ ಘಟ್ಟವನ್ನು ಮುಟ್ಟಿದ್ದ ನಾಗಿ ಮತ್ತು ರಾಮಣ್ಣರ ಬದುಕಿನ ಒಡಕನ್ನು ಮುಚ್ಚಲು ಮೂಕಜ್ಜಿ ಯತ್ನ ನಡೆಸಿ ಅದರಲ್ಲಿ ಯಶಸ್ವಿಯಾಗುತ್ತಾಳೆ.

ಸುಬ್ರಾಯನ ಸ್ನೇಹಿತ ಜನಾರ್ಧನ ಎಡಬಿಡಂಗಿ ವಿದ್ಯಾವಂತ. ಹೆಣ್ಣುಗಳ ಜೊತೆ ಚಕ್ಕಂದವಾಡುತ್ತ ವಿವಾಹ ಜೀವನದ ಜವಾಬ್ದಾರಿಯಿಂದ ದೂರಸರಿಯುವ ಅವನ ಬದುಕಿನ ಪರಿಯನ್ನು ಅರಿತ ಮೂಕಜ್ಜಿ ಅವನನ್ನು ಎಚ್ಚರಿಸುತ್ತಾಳೆ.

ಜೀವನದಲ್ಲಿ ಹೆಣ್ಣಿನ ಸಂಬಂಧವನ್ನು ನಿರಾಕರಿಸುತ್ತಾ ಅಥವಾ ಆ ಬಗೆಯ ಸೋಗನ್ನು ಹಾಕುತ್ತಾ ಡೋಂಗಿ ವೇದಾಂತವನ್ನು ಮುಂದೆ ಮಾಡಿ ಸಮಯಕ್ಕೆ ತಕ್ಕಂತೆ ಪಾರಮಾರ್ಥ ಉಲ್ಲೇಖಿಸುವ ಅನಂತರಾಯನ ಒಳಗನ್ನು ಕಂಡ ಆಕೆ ಆತನಿಗೂ ರಾಮದಾಸನಿಗೂ ಇರುವ ಲೈಂಗಿಕ ಸಂಬಂಧವನ್ನು ಬಯಲಿಗೆಳೆಯುತ್ತಾಳೆ.

ಹೀಗೆ ಆಸ್ತಿಕಳೂ ಅಲ್ಲದ; ನಾಸ್ತಿಕಳೂ ಅಲ್ಲದ ಮೂಕಜ್ಜಿ ಅಸ್ತತ್ವವಾದಿಯಂತೆ ಮಾನವ ಮೌಲ್ಯಗಳನ್ನು ಮೆರೆಯುತ್ತಾ ಮನುಷ್ಯನ ಅನ್ವೇಷಕ ಪ್ರವೃತ್ತಿಯ ಮೂರ್ತರೂಪವಾಗಿದ್ದಾಳೆ.

English

The celebrated Kannadiga Dr. Shivaram Karanth authored ‘Mookajjiya Kanasugalu’ (Visions of Mookajji) in 1968 and was decorated with the Jnanapeetha Award in 1977. Eight-time National Award-winning Director P. Sheshadri has beautifully rendered Dr. Karanth’s Mookajjiya Kanasugalu on the big screen.

‘Mookajjiya Kanasugalu’ is an attempt to re-investigate our cultural roots in the light of archival evidence and to do so with a scientific outlook. It is also an attempt to present multitudinous perspectives on age-old customs, gender relationships and societal structure while putting it all to test on the touchstone of humanism.

Mookajji, the protagonist, is not only a tool of this investigation but she herself is an investigator as well. Her journey in life as an octogenarian has been marked by untold misery, deprivation and oppression. Walking through fire, she has been able to retain her objectivity and a sense of justice which set her apart as a humanist. She has access to scientific rationale as well as to the magical power of inexplicable Extra Sensory Perception! She is at once the root, the branch, the stem and the leaves of our structured community. This eternal ‘Tree of life’ is the symbol of our very existence as a strong cultural presence in the sub-continent.

Mookajjiya Kanasugalu unravels as a conversation between Mookajji and her grandson Subraya. Mookajji narrates her life’s travails that she is forced to endure like child-marriage, and becoming a widow soon after her wedding. Subraya represents you, me and every individual who has doubts about the origins of our beliefs and tradition. Dr. Karanth, through Mookajji, clinically examines these deep-rooted beliefs and traditions. In a sense, Mookajji is not a mere physical presence as can easily be misconstrued. She embodies the stream of consciousness that has enveloped an aeon that has shaped our civilization.

10th Oct is Dr. Karanth’s birthday. On this day, how about we remember this multi-faceted, multi-talented human being? How about we feel the pride of being a Kannadiga by celebrating Dr. Shivaram Karanth? How about we see the world through the eyes of Dr. Karanth’s Mookajji?

Come, let’s experience Mookajjiya Kanasugalu at TERIFLIX In-Depth Screening! After the screening of this awesome movie, you get to have an opportunity to delve into a deep conversation with the celebrated Director P. Sheshadri.

In exchange for each pass you buy, you will receive the following:

  • Entry to one person for a screening of the film. You get to experience the film before it hits the theaters.
  • Up to 90 minutes of close and personal interaction with Director. P. Sheshadri. You will get to personally ask questions and get deep, insightful answers from the Director himself.
  • One Social Screening Pass, which you may use anytime in the future to launch or join Social Screenings. [Learn more]
  • Coffee and Snacks during Intermission
  • Hearty sathvik food after the screening
  • The entire event will be filmed and released as a short-documentary on our website. You will be prominently featured in the video as someone who spent time with the film and its maker(s).

Event Organizer

This event is organized by Navyachithra Creations.

Testimonails

"TERIFLIX has set out to build a bridge between audience and the film maker with events like this. As a director I am always curious to know how the audience is reacting to my film and what their perspectives are. TERIFLIX's Indepth Screening is a fantastic event for such interactions."
- P. Sheshadri, Film Director, 9 Time National Award Recipient

Cancellation Policy

  • 3 days or more before the event: Cancellation with 95% refund.
  • 24 hours to 3 days before the event: Cancellation with 50% refund.
  • Less than 24 hours before the event: Cancellation with no refund.

NOTE: Refunds, if any, shall be processed within 20 days from the date of cancellation. All refunds shall be processed offline (via bank-transfer or cheque) and not through the payment gateway.

Venue

TERIFLIX Purple Girinagar
#177, 50 Feet Road, 5th Cross,
Opp. Avalahalli BDA Park,
BSK 3rd Stage, Girinagar,
Benglauru - 560085
Google Maps Link